ಸಾ ರ್ವ ಜನಿಕ ವಲಯದ ಉದ್ಯಮಗಳಲ್ಲಿ ಹೂ ಡಿಕೆ ಏಕೆ ಮಾ ಡಬೇಕು ? ಇದರ ಪ್ರಯೋ ಜನಗಳೇನು ?

| ಚೇತನ್ ಎಸ್, ಮ್ಯೂಚುಯಲ್ ಫಂಡ್ ವಿತರಕರು
ಸ್ವಾತಂತ್ರ್ಯಾನಂತರ ಸಾರ್ವಜನಿಕ ವಲಯದ ಉದ್ಯಮಗಳು (PSU) ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ದೇಶದ ಆರ್ಥಿಕತೆಯ ಆಧಾರಸ್ತಂಭ ಎನ್ನುವ ಯಾವುದೇ ಒಂದು ವಲಯವನ್ನು ತೆಗೆದುಕೊಂಡರೂ ಅದರಲ್ಲಿ ಪಿಎಸ್ಯು ಹೆಸರು ಇರುವುದು ಗಮನಾರ್ಹವಾಗಿದೆ. ಪಿಎಸ್ಯುನ ವೈಶಿಷ್ಟ್ಯವೇನೆಂದರೆ ಇದರಲ್ಲಿ ಭಾರತ ಸರ್ಕಾರವು (ಕೇಂದ್ರ, ರಾಜ್ಯ ಅಥವಾ ಎರಡೂ) ಕನಿಷ್ಠ ಶೇ. 51 ರಷ್ಟು ಪಾಲನ್ನು ಹೊಂದಿರುತ್ತದೆ.
ಪಿಎಸ್ಯು ಕಂಪೆನಿಗಳು, ಖಾಸಗಿ ಕಂಪೆನಿಗಳಿಗಿಂತಲೂ ಭಿನ್ನವಾಗಿದ್ದು, ಕೆಲವೊಂದು ವೈಶಿಷ್ಟ್ಯಗಳನ್ನು ಹೊಂದಿವೆ. ಪಿಎಸ್ಯು ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಕೆಲವು ಪ್ರಯೋಜನಗಳು ಇಲ್ಲಿವೆ:
* ಕಡಿಮೆ ವೆಚ್ಚದ ಸಾಲ – ಪಿಎಸ್ಯು ಕಂಪೆನಿಗಳು ಅತ್ಯುತ್ತಮ ಕ್ರೆಡಿಟ್ ರೇಟಿಂಗ್ ಹೊಂದಿರುವ ಹಿನ್ನೆಲೆಯಲ್ಲಿ ಸಾಲದ ವೆಚ್ಚವು ಕಡಿಮೆ ಮಟ್ಟದಲ್ಲಿ ಇರುತ್ತದೆ. ಇಂಥ ಕಂಪೆನಿಗಳು ಬಂಡವಾಳ ಮಾರುಕಟ್ಟೆಗಳಿಗೆ ಸುಲಭವಾಗಿ ಪ್ರವೇಶವನ್ನು ಪಡೆಯಬಹುದಾದ ಹಿನ್ನೆಲೆಯಲ್ಲಿ, ಬಡ್ಡಿದರ ಪ್ರಮಾಣವು ಏರುಗತಿಯಲ್ಲಿ ಇರುವಾಗಲೂ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ದರದಲ್ಲಿ ಬಾಂಡ್ಗಳನ್ನು ತ್ವರಿತವಾಗಿ ವಿತರಿಸಬಲ್ಲವು.
* ಹೆಚ್ಚಿನ ಮಟ್ಟದ ಸ್ಥಿರತೆ: ಖಾಸಗಿ ಕಂಪೆನಿಗಳು ಒಬ್ಬ ವ್ಯಕ್ತಿ ಅಥವಾ ಸಮೂಹದ ಒಡೆತನದಲ್ಲಿ ಇರುತ್ತವೆ. ಆದರೆ ಪಿಎಸ್ಯು ಬೋರ್ಡ್ಗಳು ಪ್ರಾಥಮಿಕವಾಗಿ ಸರ್ಕಾರದಿಂದ ನಿಯಂತ್ರಿಸಲ್ಪಡುತ್ತವೆ. ಈ ಕಾರಣದಿಂದಾಗಿ ಖಾಸಗಿ ಕಂಪೆನಿಗಳಿಗೆ ಹೋಲಿಸಿದರೆ ಹೆಚ್ಚಿನ ಮಟ್ಟದ ಸ್ಥಿರತೆಯನ್ನು ಹೊಂದಿವೆ.
ಅಪಾಯದ ಮಟ್ಟ ಕಡಿಮೆ: ಪಿಎಸ್ಯು ಕಂಪೆನಿಗಳು ಸಂಬಂಧವಿಲ್ಲದ ವ್ಯವಹಾರಗಳಿಗೆ ಕೈ ಹಾಕುವುದಿಲ್ಲ. ಸರ್ಕಾರದ ಅನುಮೋದನೆ ಇಲ್ಲದ ಆಸ್ತಿಗಳ ಮಾರಾಟ ಮಾಡುವುದಾಗಲೀ, ಸಂಬಂಧವಿಲ್ಲದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದಾಗಲೀ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗಳಿಗೆ ಹೋಲಿಸಿದರೆ ಇಲ್ಲಿನ ವ್ಯವಹಾರದಲ್ಲಿ ಅಪಾಯದ ಮಟ್ಟ ತೀರಾ ಕಡಿಮೆ ಎನ್ನಬಹುದು.
* ಹೆಚ್ಚಿನ ಲಾಭಾಂಶಗಳು
ಬೇರೆ ಎಲ್ಲಾ ಕಂಪೆನಿಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತವಾಗಿರುವ ಕಂಪೆನಿಗಳ ಹೆಸರಿನಲ್ಲಿ ಮೊದಲಿಗೆ ಕೇಳಿಬರುವುದು ಪಿಎಸ್ಯು. ಇಂದಿನ ಬದಲಾಗುತ್ತಿರುವ ಸನ್ನಿವೇಶದಲ್ಲಿ ಪಿಎಸ್ಯು ಕಂಪೆನಿಗಳಲ್ಲಿ ಸುರಕ್ಷತೆ ಹೆಚ್ಚು ಎಂದೇ ಹೇಳಬಹುದು. ಇಂಧನ, ಬ್ಯಾಂಕ್, ರಕ್ಷಣಾ ಕ್ಷೇತ್ರ ಮುಂತಾದವುಗಳಲ್ಲಿ ಕೂಡ ಪಿಎಸ್ಯು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.
ಇತ್ತೀಚೆಗೆ ಐಸಿಐಸಿಐ ಪ್ರುಡೆನ್ಶಿಯಲ್, ‘ಐಸಿಐಸಿಐ ಪ್ರುಡೆನ್ಶಿಯಲ್ ಪಿಎಸ್ಯು ಇಕ್ವಿಟಿ ಫಂಡ್’ ಅನ್ನು ಪರಿಚಯಿಸಿದೆ.